Index   ವಚನ - 414    Search  
 
ಎನ್ನ ಚಿತ್ತ ಸುಚಿತ್ತವಾಯಿತ್ತಯ್ಯಾ. ಎನ್ನ ಬುದ್ಧಿ ಸುಬುದ್ಧಿಯಾಯಿತ್ತಯ್ಯಾ. ಎನ್ನ ಅಹಂಕಾರ ನಿರಹಂಕಾರವಾಯಿತ್ತಯ್ಯಾ. ಎನ್ನ ಮನ ಸುಮನವಾಯಿತ್ತಯ್ಯಾ. ಎನ್ನ ಜ್ಞಾನ ಸುಜ್ಞಾನವಾಯಿತ್ತಯ್ಯಾ. ಎನ್ನ ಭಾವ ಸದ್ಭಾವವಾಯಿತ್ತಯ್ಯಾ. ನಿಮ್ಮ ಮಹಾಜ್ಞಾನದ ಸಂಗದಿಂದೆ ಎನ್ನ ಸಕಲ ಕರಣಂಗಳು ನಿಮ್ಮಲ್ಲಿ ತರಹರವಾದವಾಗಿ ಅಖಂಡೇಶ್ವರಾ, ನಿಮ್ಮ ಪರಮಪ್ರಸಾದವು ಎನಗೆ ಸಾಧ್ಯವಾಯಿತ್ತಯ್ಯಾ.