ಕ್ಷೀರದ ರುಚಿಯ ಹಂಸಬಲ್ಲುದಲ್ಲದೆ,
ನೀರೊಳಗಿರ್ಪ ನೀರಗೋಳಿ ಎತ್ತ ಬಲ್ಲುದಯ್ಯಾ?
ಕಬ್ಬಿನ ಸ್ವಾದವ ಮದಗಜಬಲ್ಲುದಲ್ಲದೆ,
ಸೋಗೆಯ ತಿಂಬ ಕುರಿ ಎತ್ತಬಲ್ಲುದಯ್ಯಾ?
ಪುಷ್ಪದ ಪರಿಮಳವ ಭೃಂಗಬಲ್ಲುದಲ್ಲದೆ,
ಮರಕಡಿಯುವ ಗುಂಗೆಯಹುಳ ಎತ್ತ ಬಲ್ಲುದಯ್ಯಾ?
ಆದಿಸ್ಥಳಕುಳದ ನಿರ್ಣಯವ ಅನಾದಿಶರಣ ಬಲ್ಲನಲ್ಲದೆ
ಈ ಲೋಕದ ಗಾದೆಯಮನುಜರು
ಎತ್ತ ಬಲ್ಲರಯ್ಯಾ ಅಖಂಡೇಶ್ವರಾ?
Art
Manuscript
Music
Courtesy:
Transliteration
Kṣīrada ruciya hansaballudallade,
nīroḷagirpa nīragōḷi etta balludayyā?
Kabbina svādava madagajaballudallade,
sōgeya timba kuri ettaballudayyā?
Puṣpada parimaḷava bhr̥ṅgaballudallade,
marakaḍiyuva guṅgeyahuḷa etta balludayyā?
Ādisthaḷakuḷada nirṇayava anādiśaraṇa ballanallade
ī lōkada gādeyamanujaru
etta ballarayyā akhaṇḍēśvarā?