Index   ವಚನ - 444    Search  
 
ತನುವಿನ ಮಧ್ಯದಲ್ಲಿ ಹೂಳಿರ್ದ ಇಷ್ಟಲಿಂಗದಲ್ಲಿ ತನುವನಿಕ್ಷೇಪವ ಮಾಡಬಲ್ಲರೆ ಅನುಭಾವಿಯೆಂಬೆನು. ಮನದ ಮಧ್ಯದಲ್ಲಿ ಹೂಳಿರ್ದ ಪ್ರಾಣಲಿಂಗದಲ್ಲಿ ಮನವ ನಿಕ್ಷೇಪವ ಮಾಡಬಲ್ಲರೆ ಅನುಭಾವಿಯೆಂಬೆನು. ಜೀವನ ಮಧ್ಯದಲ್ಲಿ ಹೂಳಿರ್ದ ಭಾವಲಿಂಗದಲ್ಲಿ ಜೀವನ ನಿಕ್ಷೇಪವ ಮಾಡಬಲ್ಲರೆ ಅನುಭಾವಿಯೆಂಬೆನು. ಇಂತೀ ಅನುಭಾವದ ಅನುವನರಿಯದೆ ತನುವಿನ ಕೈಯಲ್ಲಿ ಘನಲಿಂಗವ ಹಿಡಿದಿರ್ದಡೇನು ಅದು ಹುಟ್ಟುಗುರುಡನ ಕೈಯ್ಯ ಕನ್ನಡಿಯಂತೆ ಕಾಣಾ ಅಖಂಡೇಶ್ವರಾ.