ಅನುಭಾವಿಯಾದಡೆ ತಿರುಳು ಕರಗಿದ
ಹುರಿದ ಬೀಜದಂತಿರಬೇಕು.
ಅನುಭಾವಿಯಾದಡೆ ಸುಟ್ಟ ಸರವೆಯಂತಿರಬೇಕು.
ಅನುಭಾವಿಯಾದಡೆ ದಗ್ಧಪಟದಂತಿರಬೇಕು.
ಅನುಭಾವಿಯಾದಡೆ ದರ್ಪಣದೊಳಗಣ
ಪ್ರತಿಬಿಂಬದಂತಿರಬೇಕು.
ಅನುಭಾವಿಯಾದಡೆ ಕಡೆದಿಳುಹಿದ
ಕರ್ಪುರದ ಪುತ್ಥಳಿಯಂತಿರಬೇಕು.
ಇಂತಪ್ಪ ಮಹಾನುಭಾವಿಗಳು
ಆವ ಲೋಕದೊಳಗೂ
ಅಪೂರ್ವವಯ್ಯಾ ಅಖಂಡೇಶ್ವರಾ.
Art
Manuscript
Music
Courtesy:
Transliteration
Anubhāviyādaḍe tiruḷu karagida
hurida bījadantirabēku.
Anubhāviyādaḍe suṭṭa saraveyantirabēku.
Anubhāviyādaḍe dagdhapaṭadantirabēku.
Anubhāviyādaḍe darpaṇadoḷagaṇa
pratibimbadantirabēku.
Anubhāviyādaḍe kaḍediḷuhida
karpurada put'thaḷiyantirabēku.
Intappa mahānubhāvigaḷu
āva lōkadoḷagū
apūrvavayyā akhaṇḍēśvarā.