ಲಿಂಗದ ನಡೆ, ಲಿಂಗದ ನುಡಿ,
ಲಿಂಗದ ನೋಟ, ಲಿಂಗದ ಬೇಟ, ಲಿಂಗದ ಕೂಟ,
ಲಿಂಗದಲ್ಲಿ ಮನವಡಗಿರ್ದ, ಲಿಂಗಾನುಭಾವಿಗಳ
ಸಂಗದಲ್ಲಿರಿಸಿ ಸಲಹಯ್ಯಾ ಎನ್ನ ಅಖಂಡೇಶ್ವರಾ.
Art
Manuscript
Music
Courtesy:
Transliteration
Liṅgada naḍe, liṅgada nuḍi,
liṅgada nōṭa, liṅgada bēṭa, liṅgada kūṭa,
liṅgadalli manavaḍagirda, liṅgānubhāvigaḷa
saṅgadallirisi salahayyā enna akhaṇḍēśvarā.