ವಚನ - 116     
 
ಕಾರಣವಿಲ್ಲ ಕಾರ್ಯವಿಲ್ಲ, ಏತಕ್ಕೆ ಭಕ್ತರಾದೆವಿಂಬಿರೊ? ಐವರ ಬಾಯ ಎಂಜಲನುಂಬಿರಿ, ಐವರು ಸ್ತ್ರೀಯರ ಮುಖವನರಿಯಿರಿ. ಮೂರು ಸಂಕಲೆಯ ಕಳೆಯಲರಿಯಿರಿ. ಕಾಯವಿಡಿದು ಲಿಂಗವ ಮುಟ್ಟಿಹೆನೆಂಬ, ಭ್ರಮೆಯ ನೋಡಾ ಗುಹೇಶ್ವರಾ.