Index   ವಚನ - 452    Search  
 
ವಿಶ್ವದೊಳಗೆಲ್ಲ ನೀನೇ ದೇವ, ವಿಶ್ವಭರಿತನು ನೀನೇ ದೇವ. ವಿಶ್ವರೂಪನು ನೀನೇ ದೇವ. ವಿಶ್ವಪತಿ ನೀನೇ ದೇವ. ವಿಶ್ವಾತೀತನು ನೀನೇ ದೇವ ಅಖಂಡೇಶ್ವರಾ.