Index   ವಚನ - 456    Search  
 
ಕಪ್ಪೆಯ ಶಿರದ ಮೇಲೆ ಎಪ್ಪತ್ತೆರಡು ಪುರವಿರ್ಪುವು. ಆ ಪುರದೊಳಗೆ ಒಬ್ಬ ನಾರಿಯಿರ್ಪಳು. ಆ ನಾರಿಯ ಕೈಯಲ್ಲಿ ಒಂದು ನಾರಿವಾಣದ ಸಸಿಯಿರ್ಪುದು. ಈ ನಾರಿವಾಣದ ಸಸಿಯ ಮೂಲದಲ್ಲಿ ಮೂರುಲೋಕಂಗಳಡಗಿರ್ಪುವು. ಇಂತಪ್ಪ ಬೆಡಗಿನ ಕೀಲವ ಬಲ್ಲಾತನೆ ಪ್ರಾಣಲಿಂಗಸಂಬಂಧಿಯಯ್ಯಾ ಅಖಂಡೇಶ್ವರಾ.