Index   ವಚನ - 471    Search  
 
ಉತ್ತರಗಿರಿಯ ಚಿತ್ರಮಂಟಪದೊಳಗೆ ರತ್ನದ ತೋರಣದ ಪರಿಯ ನೋಡಾ! ಮುತ್ತಿನ ಗದ್ದುಗೆಯ ಮೇಲೆ ಛತ್ತೀಸಕೋಟಿ ಚಂದ್ರಸೂರ್ಯರ ಬೆಳಗನೊಳಕೊಂಡ ನಿತ್ಯಪರಿಪೂರ್ಣವಸ್ತುವ ಕೂಡಬಲ್ಲಾತನೆ ಕರ್ತೃ ಶಿವ ತಾನೆ ನೋಡಾ ಅಖಂಡೇಶ್ವರಾ.