ಗಗನಮಂಟಪದಲ್ಲಿ
ಅಘಹರನ ಪೂಜೆ ಒಗುಮಿಗಿಲಾಗುತಿರ್ಪುದು ನೋಡಾ!
ಅಲ್ಲಿ ದಿಗಿಭುಗಿಲೆಂಬ ಶಬ್ದದ ಸೊಗಸು ನೋಡಾ
ಅಖಂಡೇಶ್ವರಾ.
Art
Manuscript
Music
Courtesy:
Transliteration
Gaganamaṇṭapadalli
aghaharana pūje ogumigilāgutirpudu nōḍā!
Alli digibhugilemba śabdada sogasu nōḍā
akhaṇḍēśvarā.