ಅಂಬರದೇಶದ ಕುಂಭ ಕೋಣೆಯೊಳಗೆ
ಜಂಬುಲಿಂಗಪೂಜೆಯ ಸಂಭ್ರಮವ ನೋಡಾ!
ಅಂಬುಜಮುಖಿಯರು ಆರತಿಯನೆತ್ತಿ
ಶಂಭು ಶಿವಶಿವ ಹರಹರ ಎನುತಿರ್ಪರು ನೋಡಾ!
ತುಂಬಿದ ಹುಣ್ಣಿಮೆಯ ಬೆಳದಿಂಗಳು
ಒಂಬತ್ತು ಬಾಗಿಲಲ್ಲಿ ತುಂಬಿ
ಹೊರಸೂಸುತಿರ್ಪುದು ನೋಡಾ!
ಈ ಸಂಭ್ರಮವನೇನ ಹೇಳುವೆನಯ್ಯಾ ಅಖಂಡೇಶ್ವರಾ!
Art
Manuscript
Music
Courtesy:
Transliteration
Ambaradēśada kumbha kōṇeyoḷage
jambuliṅgapūjeya sambhramava nōḍā!
Ambujamukhiyaru āratiyanetti
śambhu śivaśiva harahara enutirparu nōḍā!
Tumbida huṇṇimeya beḷadiṅgaḷu
ombattu bāgilalli tumbi
horasūsutirpudu nōḍā!
Ī sambhramavanēna hēḷuvenayyā akhaṇḍēśvarā!