Index   ವಚನ - 483    Search  
 
ಸೂರ್ಯಮಂಡಲದಲ್ಲಿ ವೀರಗಣಂಗಳ ವಿಪರೀತವಿದೇನೋ? ಚಂದ್ರಮಂಡಲದಲ್ಲಿ ನಂದಿವಾಹನರ ಸಂದಣಿಯಿದೇನೋ? ಅಗ್ನಿಮಂಡಲದಲ್ಲಿ ಪ್ರಾಜ್ಞಗಣಂಗಳ ಸಂಜ್ಞೆಯಿದೇನೋ? ಇಂತೀ ಮಂಡಲತ್ರಯದ ಮಧ್ಯದಲ್ಲಿ ಮೂರ್ತಿಗೊಂಡಿರ್ಪ ಅಖಂಡಾದ್ವಯ ಅವಿರಳ ಪರಶಿವನ ಅತಿಶಯ ಬೆಳಗಿನೊಳಗೆ ತಾನು ಮರೆದು ಪರಶಿವನಾಗಿರ್ದನಯ್ಯಾ ಅಖಂಡೇಶ್ವರಾ.