ಇನ್ನು ತಾರಕಯೋಗದ ಲಕ್ಷಣವೆಂತೆನೆ:
ವೇದ ಶಾಸ್ತ್ರಾಗಮ ಪುರಾಣ ಕವಿತ್ವಗಳೆಂಬ
ನುಡಿಗಳಿಂದೆ ವಾಚಾಳಕರಾದವರಿಗೆ
ತಾರಕಬ್ರಹ್ಮವು ಸಾಕ್ಷಾತ್ಕಾರವಾಗದು.
ಬ್ರಹ್ಮಚಾರಿ ಗೃಹಸ್ಥ ವಾನಪ್ರಸ್ಥ ಯತಿಗಳೆಂಬ
ಚತುರಾಶ್ರಮಗರ್ವಿತರಿಗೆ
ತಾರಕಬ್ರಹ್ಮವು ಸಾಕ್ಷಾತ್ಕಾರವಾಗದು.
ಜ್ಞಾನಖಾಂಡಿ ಕರ್ಮಖಾಂಡಿಗಳೆಂಬ
ವೇದಾಂತಿ ಸಿದ್ಧಾಂತಿಗಳಿಗೆ
ತಾರಕಬ್ರಹ್ಮವು ಸಾಕ್ಷಾತ್ಕಾರವಾಗದು.
ಶ್ರೀ ಗುರುಕಟಾಕ್ಷದಿಂದಲ್ಲದೆ ತಾರಕಬ್ರಹ್ಮವು
ಆರಾರಿಗೂ ಸಾಕ್ಷಾತ್ಕಾರವಾಗದಯ್ಯಾ ಅಖಂಡೇಶ್ವರಾ.
Art
Manuscript
Music
Courtesy:
Transliteration
Innu tārakayōgada lakṣaṇaventene:
Vēda śāstrāgama purāṇa kavitvagaḷemba
nuḍigaḷinde vācāḷakarādavarige
tārakabrahmavu sākṣātkāravāgadu.
Brahmacāri gr̥hastha vānaprastha yatigaḷemba
caturāśramagarvitarige
tārakabrahmavu sākṣātkāravāgadu.
Jñānakhāṇḍi karmakhāṇḍigaḷemba
vēdānti sid'dhāntigaḷige
tārakabrahmavu sākṣātkāravāgadu.
Śrī gurukaṭākṣadindallade tārakabrahmavu
ārārigū sākṣātkāravāgadayyā akhaṇḍēśvarā.