ಗುರುಸ್ಥಲಭಕ್ತರ ಮೂಲ ಜ್ಞಾನಶಕ್ತಿಗಳಾರು
ಗುರುಸ್ವರೂಪವಾದವು.
ಆ ಗುರುಸ್ವರೂಪವನುಳ್ಳ ಶಕ್ತಿಗಳಿಂದ,
ಪರಮಚೈತನ್ಯವೆಂಬ ಮಂಟಪ ಉದಯಿಸಿ
ಸಕಲಲೋಕಕ್ಕೆ ಆದಿಯಾಯಿತ್ತು.
ಆ ಮಂಟಪದ ಮೇಲೆ ನಾನು ಕುಳಿತು ಸಂತೋಷದಿಂದ
ಗುಹೇಶ್ವರಲಿಂಗವ ಕಣ್ಣು ತುಂಬಿ ನೋಡಿದ ನೋಟ,
ಸಕಲಭಕ್ತರಿಗೆ ಕೂಟವಾಯಿತ್ತು
ಕಾಣಾ ಸಂಗನಬಸವಣ್ಣಾ.
Transliteration Gurusthalabhaktara mūla jñānaśaktigaḷāru
gurusvarūpavādavu.
Ā gurusvarūpavanuḷḷa śaktigaḷinda,
paramacaitan'yavemba maṇṭapa udayisi
sakalalōkakke ādiyāyittu.
Ā maṇṭapada mēle nānu kuḷitu santōṣadinda
guhēśvaraliṅgava kaṇṇu tumbi nōḍida nōṭa,
sakalabhaktarige kūṭavāyittu
kāṇā saṅganabasavaṇṇā.
Hindi Translation गुरुस्थल भक्तों की मूल ज्ञानशक्ति छः गुरुस्वरुप बने।
उन गुरुस्वरूप रहे शक्तियों से,
परम चैतन्य जैसामंटप उदय होने से
सकल लोक को आदि बना था।
उस मंटप पर मैं बैठे संतोष से
गुहेश्वर लिंग को आँख भर देखने का दृश्य
सकल भक्तों का मिलन हुआ था देख संगनबसवण्णा।
Translated by: Eswara Sharma M and Govindarao B N