ಚಂದ್ರಸೂರ್ಯರೆನಿಸುವ
ವಾಮದಕ್ಷಿಣ ನೇತ್ರಂಗಳಮಧ್ಯದಲ್ಲಿ ತಾರಕಂಗಳಾಗಿರ್ದ
ಊರ್ಧ್ವಮುಖವಪ್ಪುದರಿಂದೆ ಚಲಿಸದೆ ಜಪಿಸುತಿರ್ಪ
ಜೀವಚೈತನ್ಯಸೂತ್ರಕ್ಕೆ ಮುಖ್ಯವಾದ
ಪರಮಸೂಕ್ಷ್ಮದ್ವಾರಗಳಿಂ ಕೂಡಿದ
ನೀಲಬಿಂದುಗಳೆರಡನು
ಶ್ರೀಗುರೂಪದೇಶದಿಂದೆ ಲೇಸಾಗಿ ತಿಳಿದು
ಆ ತಾರಕಬ್ರಹ್ಮವನಭ್ಯಾಸಂಗೈವಾತನೆ
ರಾಜಯೋಗಿ ನೋಡಾ ಅಖಂಡೇಶ್ವರಾ.