ರಾಜಯೋಗಾನುಸಂಧಾನದಿಂದೆ
ಕಾಣಿಸುವ ವಿಚಿತ್ರ ಪ್ರಭಾಮಂಡಲಕ್ಕೆ
ದಿವ್ಯಾನಂದ ನಿಧಿನಿಕ್ಷೇಪಭೂಮಿಯಪ್ಪ
ಪರಮ ಹೃದಯವೆನಿಸುವ ಲೋಚನಂಗಳೆ
ಮುಖ್ಯವಾಗಿರ್ಪುವು.
ಆ ಲೋಚನಂಗಳ ಮಧ್ಯದಲ್ಲಿ
ಅಭೇದ್ಯ ಪರವಸ್ತುವನರಿವುದೆ
ತಾರಕಯೋಗ ನೋಡಾ ಅಖಂಡೇಶ್ವರಾ.
Art
Manuscript
Music
Courtesy:
Transliteration
Rājayōgānusandhānadinde
kāṇisuva vicitra prabhāmaṇḍalakke
divyānanda nidhinikṣēpabhūmiyappa
parama hr̥dayavenisuva lōcanaṅgaḷe
mukhyavāgirpuvu.
Ā lōcanaṅgaḷa madhyadalli
abhēdya paravastuvanarivude
tārakayōga nōḍā akhaṇḍēśvarā.