ಸಕಲ ಸಾಧನಂಗಳಿಲ್ಲದೆ ಬಹುಪ್ರಯಾಸವಿಲ್ಲದೆ
ಅತಿ ಸುಲಭದಲ್ಲಿಯೆ ಜೀವನ್ಮುಕ್ತಿಯನೀವ
ಅಮನಸ್ಕಯೋಗವೆಂತೆನೆ:
ಅಂತರಂಗದ ಮನಮಂ ನೆನೆಯದಂತೆ ಮುದ್ರಿಸಿ
ನಿರ್ಲಕ್ಷ್ಯದೊಳ್ನಿಲುವುದೆ ಅಮನಸ್ಕರಾಜಯೋಗ ನೋಡಾ
ಅಖಂಡೇಶ್ವರಾ.
Art
Manuscript
Music
Courtesy:
Transliteration
Sakala sādhanaṅgaḷillade bahuprayāsavillade
ati sulabhadalliye jīvanmuktiyanīva
amanaskayōgaventene:
Antaraṅgada manamaṁ neneyadante mudrisi
nirlakṣyadoḷniluvude amanaskarājayōga nōḍā
akhaṇḍēśvarā.