Index   ವಚನ - 510    Search  
 
ರಾಜಯೋಗದಲ್ಲಿ ನಿಶ್ಚಿಂತನಾದ ಯೋಗೀಶ್ವರನ ಸಹಜವರ್ತನಧರ್ಮವೆಂತೆನೆ: ಅರ್ಧಾವಲೋಚನವೆನಿಸುವ ಅರೆಮುಗಿದ ನೇತ್ರವುಳ್ಳಾತನಾಗಿ, ಸಕಲ ಸಂಶಯಂಗಳ ಬಿಟ್ಟ ಮನವುಳ್ಳಾತನಾಗಿ, ಮತ್ತಾ ಮನವು ಸುಷುಪ್ತಿಯಲ್ಲಿ ಮರೆಯದಂತೆ ಜಾಗ್ರದಲ್ಲಿ ಕೆದರದಂತೆ ನಿಶ್ಚಲಮಂ ಮಾಡಿ, ಭ್ರೂಮಧ್ಯಲಕ್ಷ್ಯದಲ್ಲಿರಲದೇ ಉನ್ಮನಿಯ ಸ್ವರೂಪವು. ಅದೇ ಪರಮಪದವು; ಅದೇ ಜ್ಞಾನವು; ಅದೇ ಮೋಕ್ಷವು; ಅದೇ ಪರಮರಹಸ್ಯಮಾದ ಶಿವಯೋಗವು. ಅದರಿಂದೆ ಅನ್ಯಮಾದ ಅರ್ಥಮಂ ಪೇಳ್ವ ಗ್ರಂಥವಿಸ್ತಾರವೆಲ್ಲವು ವ್ಯರ್ಥಮಪ್ಪುದಾಗಿ ಈ ಉನ್ಮನಿಯ ಸಾಧಿಸುವಾತನೆ ಜೀವನ್ಮುಕ್ತ ನೋಡಾ ಅಖಂಡೇಶ್ವರಾ.