Index   ವಚನ - 513    Search  
 
ಎನ್ನ ಆರುಚಕ್ರಂಗಳಲ್ಲಿ ಪೂರೈಸಿ ತುಂಬಿರ್ಪ ಪರಮಾತ್ಮನು ನೀನೇ ಅಯ್ಯಾ. ಎನ್ನ ನರನಾಳಂಗಳಲ್ಲಿ ಹೊಳೆದು ಸುಳಿವ ಪರವಸ್ತುವು ನೀನೇ ಅಯ್ಯಾ. ಎನ್ನ ಕರ ಮನ ಭಾವದ ಒಳಹೊರಗೆ ತೊಳಗಿ ಬೆಳಗುವ ಪರಬ್ರಹ್ಮವು ನೀನೇ ಅಯ್ಯಾ. ಎನ್ನ ಬ್ರಹ್ಮರಂಧ್ರದ ಸಹಸ್ರದಳಕಮಲಮಧ್ಯದಲ್ಲಿ ನಿರಂತರ ಬೆಳಗುವ ಪರಂಜ್ಯೋತಿ ನೀನೇ ಅಯ್ಯಾ ಅಖಂಡೇಶ್ವರಾ.