Index   ವಚನ - 538    Search  
 
ಆದಿಯಾಧಾರವಿಲ್ಲದ ಮುನ್ನ, ನಾದ ಬಿಂದು ಕಳೆಗಳಿಲ್ಲದ ಮುನ್ನ, ಭೇದಾಭೇದ ಬ್ರಹ್ಮಾಂಡಕೋಟಿಗಳಿಲ್ಲದ ಮುನ್ನ, ಬಸವನೆಂಬ ಬೀಜದ ಮಧ್ಯದಲ್ಲಿ ಲಿಂಗವೆಂಬ ಅಂಕುರ ಉದಯವಾಯಿತ್ತು. ಆ ಲಿಂಗಾಂಕುರವೆ ಸಕಲತತ್ವ ತೋರಿಕೆಯೆಂಬ ಶಾಖೆ ಪರ್ಣಂಗಳು ಪಸರಿಸಿ; ವೃಕ್ಷ ಪಲ್ಲವಿಸಿತ್ತು, ಇಂತಪ್ಪ ಚಿದ್‍ಬ್ರಹ್ಮವೃಕ್ಷವೆಂಬ ಪರಮಗುರು ಸಂಗನಬಸವಣ್ಣನ ಶ್ರೀಪಾದಕಮಲದಲ್ಲಿ ಭ್ರಮರನಾಗಿರಿಸಯ್ಯಾ ಅಖಂಡೇಶ್ವರಾ.