Index   ವಚನ - 578    Search  
 
ಅರಳಿಯ ಮರದೊಳಗಿರುವ ಅರಗಿಳಿಗಳಿರಾ, ನಮ್ಮ ಅಖಂಡೇಶ್ವರನ ಕಂಡರೆ ಹೇಳಿರೆ! ಮಾವಿನ ಮರದೊಳಗೆ ಕೂಗುವ ಕೋಗಿಲೆ ಹಿಂಡುಗಳಿರಾ, ನಮ್ಮ ನಾಗಭೂಷಣನ ಕಂಡಡೆ ಹೇಳಿರೆ! ಕೊಳನ ತೀರದಲಾಡುವ ಕಳಹಂಸಗಳಿರಾ, ನಮ್ಮ ಎಳೆಯಚಂದ್ರಧರನ ಕಂಡಡೆ ಹೇಳಿರೆ! ಮೇಘಧ್ವನಿಗೆ ಕುಣಿವ ನವಿಲುಗಳಿರಾ, ನಮ್ಮ ಅಖಂಡೇಶ್ವರನೆಂಬ ಅವಿರಳಪರಶಿವನ ಕಂಡಡೆ ಹೇಳಿರೆ!