Index   ವಚನ - 579    Search  
 
ಆತನ ಆಳಾಪದಿಂದೆ ಹಗಲಾದುದನರಿಯೆನವ್ವಾ! ಆತನ ಆಳಾಪದಿಂದೆ ಇರುಳಾದುದನರಿಯೆನವ್ವಾ! ಅಖಂಡೇಶ್ವರನೆಂಬ ಪ್ರಾಣದೊಲ್ಲಭನ ಕೂಡಬೇಕೆಂಬ ಭ್ರಾಂತಿಯಿಂದೆ ಹೋದುದ ಬಂದುದನರಿಯೆನವ್ವಾ!