Index   ವಚನ - 581    Search  
 
ತನ್ನನಲ್ಲದೆ ಅನ್ಯವ ನೋಡೆನವ್ವಾ. ತನ್ನನಲ್ಲದೆ ಅನ್ಯವ ಮುಟ್ಟೆನವ್ವಾ. ತನ್ನನಲ್ಲದೆ ಅನ್ಯವ ನೆನೆಯೆನವ್ವಾ. ತನ್ನನಲ್ಲದೆ ಅನ್ಯವ ಬಯಸೆನವ್ವಾ. ತನ್ನನಗಲಿ ಇನ್ನೆಂತು ಬದುಕುವೆನವ್ವಾ? ಅಖಂಡೇಶ್ವರನೆಂಬ ನಲ್ಲನ ಮುನಿಸನು ತಿಳುಹಿರವ್ವಾ.