Index   ವಚನ - 582    Search  
 
ಜೀವದೊಡೆಯನನಗಲಿ ಜೀವಿಸಲಾರೆನವ್ವಾ. ನಿಮಿಷ ನಿಮಿಷಾರ್ಧವಾದಡೂ ಬಾಳಲಾರೆನವ್ವಾ. ಹೇಳಲಿನ್ನೇನ? ಸಾವು ಬಂದಿತ್ತವ್ವಾ. ಕಂಡಡೆ ಹೇಳಿರವ್ವಾ. ನಮ್ಮ ತಂಗಿಯ ಭಾವನ ಕರೆದು ತೋರಿರವ್ವಾ ಅಖಂಡೇಶ್ವರನೆಂಬ ನಲ್ಲನ.