Index   ವಚನ - 591    Search  
 
ಸೊಕ್ಕಿದ ಜವ್ವನದ, ಕಕ್ಕಸಕುಚದ, ಸಡಲಿದ ಸೋರ್ಮುಡಿಯ, ಬಡನಡುವಿನ, ಬಳಕುವ ಹೆಣ್ಣಿನ ಕಡುಸ್ನೇಹವನಗಲಿ ಕಡೆಗೆ ಹೋಗುವುದು, ಇದು ಎಂಥ ವಿಗಡ ಚಾರಿತ್ರವೆ ಅವ್ವಾ! ಅಖಂಡೇಶ್ವರನೆಂಬ ನಲ್ಲನ ಚಿಂತೆಯಿಂದೆ, ಮನವು ಸಣ್ಣಿಸಿ, ತನುವು ಕರಗಿ ಹೋಯಿತ್ತು ನೋಡಿರವ್ವಾ.