Index   ವಚನ - 592    Search  
 
ಇಂದಿನ ಇರುಳಿನಲ್ಲಿ ನಲ್ಲನು ಚಲ್ಲವಾಡುತ ಬಂದು ಮೆಲ್ಲನೆ ಎನ್ನ ಕೈವಿಡಿದನವ್ವಾ. ಅಲ್ಲಿ ಉಟ್ಟ ಸೀರೆಯ ನಿರಿಗಳು ಸಡಲಿ ಬಿದ್ದುವವ್ವಾ. ತೊಟ್ಟ ರವಕೆಯ ಗಂಟು ಬಿಚ್ಚಿ ಕಡೆಗಾದುವವ್ವಾ. ಅಖಂಡೇಶ್ವರನೆಂಬ ನಲ್ಲನು ಎನ್ನ ಬಿಗಿಯಪ್ಪಿ ತಕ್ಕೈಸಿಕೊಂಡು ಕೂಡಿದ ಸುಖವ ಇದಿರಿಟ್ಟು ಹೇಳಲಾರೆನವ್ವಾ.