ನಲ್ಲನ ಕೂಡಿದ ಸುಖವೆಲ್ಲವ
ಮೆಲ್ಲನೆ ಉಸುರುವೆ ಕೇಳಿರವ್ವಾ.
ಏಳು ನೆಲೆಯ ಮಣಿಮಾಡದ
ಮಾಣಿಕ್ಯಮಂಟಪದುಪ್ಪರಿಗೆಯ ಮೇಲೆ
ಚಪ್ಪರ ಮಂಚವ ಹಾಸಿ,
ಒಪ್ಪುವ ಊಟವ ನೀಡಿ,
ಕರ್ಪೂರವೀಳ್ಯವ ಕೊಟ್ಟು,
ಲಜ್ಜೆಗೆಟ್ಟು ನಾಚಿಕೆಯ ತೊರೆದು,
ತನು ಜಜ್ಜರಿತವಾಗಿ,
ತೆಕ್ಕೆ ಚುಂಬನಾದಿಗಳಿಂದ ಅಮರ್ದಪ್ಪಿ
ಅಸ್ಥಿಗಳು ನುಗ್ಗುನುರಿಯಾಗಿ
ಮನದ ಪರಿಣಾಮ ಹೊರಹೊಮ್ಮಿ
ಪರಮಾನಂದ ಮಹಾಪರಿಣಾಮದ ಸುಗ್ಗಿಯೊಳಗೆ
ಪರವಶಗೊಂಡಿರ್ದೆನು
ಅಖಂಡೇಶ್ವರನೆಂಬ ನಲ್ಲನ ಕೂಡಿ.
Art
Manuscript
Music
Courtesy:
Transliteration
Nallana kūḍida sukhavellava
mellane usuruve kēḷiravvā.
Ēḷu neleya maṇimāḍada
māṇikyamaṇṭapadupparigeya mēle
cappara man̄cava hāsi,
oppuva ūṭava nīḍi,
karpūravīḷyava koṭṭu,
lajjegeṭṭu nācikeya toredu,
tanu jajjaritavāgi,
tekke cumbanādigaḷinda amardappi
asthigaḷu nuggunuriyāgi
manada pariṇāma horahom'mi
paramānanda mahāpariṇāmada suggiyoḷage
paravaśagoṇḍirdenu
akhaṇḍēśvaranemba nallana kūḍi.