Index   ವಚನ - 603    Search  
 
ಶರಣರ ಸಂಗದಿಂದೆ ತನು ಶುದ್ಧವಪ್ಪುದು ನೋಡಿರೆ. ಶರಣರ ಸಂಗದಿಂದೆ ಮನ ನಿರ್ಮಲವಪ್ಪುದು ನೋಡಿರೆ. ಶರಣರ ಸಂಗದಿಂದೆ ಸಕಲೇಂದ್ರಿಯಂಗಳು ಲಿಂಗಮುಖವಪ್ಪುವು ನೋಡಿರೆ. ನಮ್ಮ ಅಖಂಡೇಶ್ವರನ ಶರಣರ ಸಂಗದಿಂದೆ ಮುಂದೆ ಸತ್ಪಥವು ದೊರೆಕೊಂಬುದು ತಪ್ಪದು ನೋಡಿರೆ.