ಸಕಲ ಗಣಂಗಳು
ತಮ್ಮ ವಚನಾನುಭಾವವೆಂಬ ಪರಮಾಮೃತವನು
ಎನ್ನ ಕರ್ಣವೆಂಬ ಕುರುಹ ಕಟ್ಟಿ ಎರಕವೆರೆಯಲು,
ಅದು ಮನದಲ್ಲಿ ಮೂರ್ತಿಯಾಗಿ
ಒಳಗೆ ಪ್ರಾಣಲಿಂಗವಾಯಿತ್ತು; ಹೊರಗೆ ಇಷ್ಟಲಿಂಗವಾಯಿತ್ತು.
ಎನ್ನೊಳಹೊರಗೆ ಭರಿತವಾದ
ಅಖಂಡೇಶ್ವರನೆಂಬ ಪರಶಿವನು
ನುಡಿಸಿದಂತೆ ನುಡಿದೆನಲ್ಲದೆ
ಎನ್ನ ಮನಕ್ಕೆಬಂದಂತೆ ನುಡಿಯಲಿಲ್ಲ ಕೇಳಿರೆ.