Index   ವಚನ - 608    Search  
 
ಒಬ್ಬರು ನಡೆದಾಚರಣೆಯಲ್ಲಿ ನಡೆಯರು. ಒಬ್ಬರು ಹಿಡಿದ ಶೀಲವ ಹಿಡಿಯರು. ಒಬ್ಬರು ನುಡಿದ ಭಾಷೆಯ ನುಡಿಯರು. ಅದೇನು ಕಾರಣವೆಂದೊಡೆ: ತಮ್ಮ ಲಿಂಗಮೆಚ್ಚಿ ನಡೆವರು. ತಮ್ಮ ಲಿಂಗಮೆಚ್ಚಿ ಹಿಡಿವರು. ತಮ್ಮ ಲಿಂಗಮೆಚ್ಚಿ ನುಡಿವರು. ಇದು ಕಾರಣ. ಅಖಂಡೇಶ್ವರಾ, ನಿಮ್ಮ ಶರಣರು ಪರಮ ಸ್ವತಂತ್ರಶೀಲರು.