Index   ವಚನ - 609    Search  
 
ಶೀಲವಂತ ಶೀಲವಂತರೆಂದು ಶೀಲಸಂಪಾದನೆಯ ಮಾಡುವ ಕರ್ಮಿಗಳನೇನೆಂಬೆನಯ್ಯಾ! ಗುರುಭಕ್ತಿಯಿಂದೆ ತನುಶುದ್ಧವಾಗಲಿಲ್ಲ. ಲಿಂಗಭಕ್ತಿಯಿಂದೆ ಮನಶುದ್ಧವಾಗಲಿಲ್ಲ. ಜಂಗಮದಾಸೋಹದಿಂದೆ ಧನಶುದ್ಧವಾಗಲಿಲ್ಲ. ಸಟೆಯ ಸಂಸಾರಶರಧಿಯೊಳಗೆ ಮುಳುಗಿ ಕುಟಿಲವ್ಯಾಪಾರವನಂಗೀಕರಿಸಿ, ನಾವು ದಿಟದ ಶೀಲವಂತರೆಂದು ನುಡಿದುಕೊಂಬ ಫಟಿಂಗ ಭಂಡರ ವಿಧಿ ಎಂತಾಯಿತ್ತೆಂದರೆ, ಹೆಂಡದ ಮಡಕೆಗೆ ವಿಭೂತಿಮಂಡಲವ ಬರೆದಂತಾಯಿತ್ತು ಕಾಣಾ ಅಖಂಡೇಶ್ವರಾ.