Index   ವಚನ - 612    Search  
 
ಇಷ್ಟಲಿಂಗದಲ್ಲಿ ತನುವನಡಗಿಸಿ, ಪ್ರಾಣಲಿಂಗದಲ್ಲಿ ಮನವನಡಗಿಸಿ, ಭಾವಲಿಂಗದಲ್ಲಿ ಜೀವನ ನಿಕ್ಷೇಪಿಸಿ, ಆ ಇಷ್ಟ ಪ್ರಾಣ ಭಾವಲಿಂಗವು ಒಂದಾದ ಮಹಾಘನ ಪರಬ್ರಹ್ಮದಲ್ಲಿ ತಾನೆಂಬ ನೆನಹಡಗಿ, ದ್ವಂದ್ವಕರ್ಮಂಗಳ ನೀಗಿ, ಆ ಪರಿಪೂರ್ಣ ಪರಬ್ರಹ್ಮವೆ ತಾನಾದುದು ಮಹಾಶೀಲವಯ್ಯಾ ಅಖಂಡೇಶ್ವರಾ.