Index   ವಚನ - 626    Search  
 
ವಿರಕ್ತಂಗೆ ಕಾಮಕ್ರೋಧಂಗಳುಂಟೆ? ವಿರಕ್ತಂಗೆ ಲೋಭಮೋಹಂಗಳುಂಟೆ? ವಿರಕ್ತಂಗೆ ಮದಮತ್ಸರಂಗಳುಂಟೆ? ವಿರಕ್ತಂಗೆ ಆಶಾರೋಷಂಗಳುಂಟೆ? ವಿರಕ್ತಂಗೆ ಕ್ಲೇಶತಾಮಸಂಗಳುಂಟೆ? ವಿರಕ್ತಂಗೆ ದೇಹಪ್ರಾಣಾಭಿಮಾನಂಗಳುಂಟೆ? ವಿರಕ್ತಂಗೆ ಇಹಪರದ ತೊಡಕುಂಟೆ? ವಿರಕ್ತಂಗೆ ನಾನು ನನ್ನದೆಂಬ ಪಕ್ಷಪಾತವುಂಟೆ? ಇಂತೀ ಭೇದವನರಿಯದ ವಿರಕ್ತಂಗೆ ಎಂತು ಮಚ್ಚುವನಯ್ಯಾ ನಮ್ಮ ಅಖಂಡೇಶ್ವರ?