ಹಲವು ವೇಷವ ಧರಿಸಿ
ಹಲವು ಭಾಷೆಯ ಕಲಿತು
ಹಲವು ದೇಶಕ್ಕೆ ಹರಿದಾಡಿದಡೇನು?
ಕಾಲಾರಿಯಂತಲ್ಲದೆ ನಿಜವಿರಕ್ತಿಯಿಲ್ಲ ನೋಡಾ.
ಅದೇನು ಕಾರಣವೆಂದೊಡೆ:
ತನುವಿನ ಆಶೆಯಾಮಿಷ ಹಿಂಗದಾಗಿ,
ಊರಾಶ್ರಯವ ಬಿಟ್ಟು
ಕಾಡಾಶ್ರಮ ಗಿರಿಗಂಹರದಲ್ಲಿರ್ದಡೇನು?
ಹಗಲು ಕಣ್ಣುಕಾಣದ ಗೂಗೆಯಂತಲ್ಲದೆ
ನಿಜವಿರಕ್ತಿಯಿಲ್ಲ ನೋಡಾ.
ಅದೇನು ಕಾರಣವೆಂದೊಡೆ:
ಮನದ ಮಾಯವಡಗದಾಗಿ,
ಹಸಿವು ತೃಷೆಯ ಬಿಟ್ಟು ಮಾತನಾಡದೆ
ಮೌನವಾಗಿರ್ದಡೇನು?
ಕಲ್ಲು ಮರ ಮೋಟು ಗುಲ್ಮಂಗಳಂತಲ್ಲದೆ
ನಿಜವಿರಕ್ತಿಯಿಲ್ಲ ನೋಡಾ.
ಅದೇನು ಕಾರಣವೆಂದೊಡೆ:
ವಿಷಯವ್ಯವಹಾರ ಹಿಂಗದಾಗಿ,
ನಿದ್ರೆಯ ತೊರೆದು ಎದ್ದು ಕುಳ್ಳಿರ್ದಡೇನು?
ಕಳ್ಳ ಊರಹೊಕ್ಕು ಉಲುಹು ಅಡಗುವನ್ನಬರ
ಮರೆಯಲ್ಲಿ ಕುಳಿತಂತಲ್ಲದೆ ನಿಜವಿರಕ್ತಿಯಿಲ್ಲ ನೋಡಾ.
ಅದೇನು ಕಾರಣವೆಂದೊಡೆ:
ಅಂತರಂಗದ ಘನಗಂಭೀರ ಮಹಾಬೆಳಗಿನ
ಶಿವಸಮಾಧಿಯನರಿಯದ ಕಾರಣ.
ಇಂತಪ್ಪ ಹೊರವೇಷದ ಡಂಭಕ ಜೊಳ್ಳುಮನದವರ
ವಿರಕ್ತರೆಂದಡೆ ಮಚ್ಚರಯ್ಯ ನಿಮ್ಮ ಶರಣರು ಅಖಂಡೇಶ್ವರಾ.
Art
Manuscript
Music
Courtesy:
Transliteration
Halavu bhāṣeya kalitu
halavu dēśakke haridāḍidaḍēnu?
Kālāriyantallade nijaviraktiyilla nōḍā.
Adēnu kāraṇavendoḍe:
Tanuvina āśeyāmiṣa hiṅgadāgi,
ūrāśrayava biṭṭu
kāḍāśrama giriganharadallirdaḍēnu?
Hagalu kaṇṇukāṇada gūgeyantalladeNijaviraktiyilla nōḍā.
Adēnu kāraṇavendoḍe:
Manada māyavaḍagadāgi,
hasivu tr̥ṣeya biṭṭu mātanāḍade
maunavāgirdaḍēnu?
Kallu mara mōṭu gulmaṅgaḷantallade
nijaviraktiyilla nōḍā.
Adēnu kāraṇavendoḍe:
Viṣayavyavahāra hiṅgadāgi,
nidreya toredu eddu kuḷḷirdaḍēnu?
Kaḷḷa ūrahokku uluhu aḍaguvannabara
mareyalli kuḷitantallade nijaviraktiyilla nōḍā.
Adēnu kāraṇavendoḍe:
Antaraṅgada ghanagambhīra mahābeḷagina
śivasamādhiyanariyada kāraṇa.
Intappa horavēṣada ḍambhaka joḷḷumanadavara
viraktarendaḍe maccarayya nim'ma śaraṇaru akhaṇḍēśvarā.