Index   ವಚನ - 630    Search  
 
ಎನ್ನ ತನುವೆ ಬಸವಣ್ಣನು. ಎನ್ನ ಮನವೆ ಚೆನ್ನಬಸವಣ್ಣನು. ಎನ್ನ ಪ್ರಾಣವೆ ಪ್ರಭುದೇವರು. ಎನ್ನ ಸರ್ವಕರಣಂಗಳೆಲ್ಲ ಅಸಂಖ್ಯಾತ- ಮಹಾಗಣಂಗಳಾಗಿರ್ಪರಾಗಿ, ಅಖಂಡೇಶ್ವರಾ, ನಿಮ್ಮೊಳಗೆ ನಿಜವು ಸಾಧ್ಯವಾಯಿತ್ತಯ್ಯ ಇಂದೆನಗೆ.