Index   ವಚನ - 640    Search  
 
ಎನ್ನ ನಡೆವ ನಡೆಗಳೆಲ್ಲ ನಿಮ್ಮ ನಡೆಗಳಯ್ಯಾ. ಎನ್ನ ನುಡಿವ ನುಡಿಗಳೆಲ್ಲ ನಿಮ್ಮ ನುಡಿಗಳಯ್ಯಾ. ಎನ್ನ ನೋಡುವ ನೋಟವೆಲ್ಲ ನಿಮ್ಮ ನೋಟವಯ್ಯಾ. ಎನ್ನ ಕೇಳುವ ಕೇಳಿಕೆಯೆಲ್ಲ ನಿಮ್ಮ ಕೇಳಿಕೆಯಯ್ಯಾ. ನಾನು ಆವಾವ ಪರಿಯಲ್ಲಿ ಆಡುವ ಆಟಗಳೆಲ್ಲಾ ನಿಮ್ಮ ಬೆಡಗಿನ ರೀತಿಯಯ್ಯಾ ಅಖಂಡೇಶ್ವರಾ.