Index   ವಚನ - 639    Search  
 
ಕಾಷ್ಠದಲ್ಲಿ ಬೊಂಬೆಯ ಮಾಡಿ, ಪಟ್ಟುನೂಲ ಸೂತ್ರವ ಹೂಡಿ, ತೆರೆಯ ಮರೆಯಲ್ಲಿ ನಿಂದು, ಸೂತ್ರಿಕನು ಕುಣಿಸಿದಡೆ ಕುಣಿಯುತಿರ್ಪುದಲ್ಲದೆ ಆ ಅಚೇತನ ಬೊಂಬೆ ತನ್ನ ತಾನೆ ಕುಣಿವುದೆ ಅಯ್ಯಾ? ಎನ್ನ ತನುವೆಂಬ ಅಚೇತನ ಬೊಂಬೆಗೆ ಪ್ರಾಣವಾಯುವೆಂಬ ಜೀವಸೂತ್ರವ ಹೂಡಿ ಮನವೆಂಬ ತೆರೆಯ ಮರೆಯಲ್ಲಿ ನಿಂದು ನೀನಾಡಿಸಿದಡೆ ನಾನಾಡುತಿರ್ಪೆನಲ್ಲದೆ ಎನಗೆ ಬೇರೆ ಸ್ವತಂತ್ರವೆ ಹೇಳಾ ಅಖಂಡೇಶ್ವರಾ?