Index   ವಚನ - 651    Search  
 
ಘನಮಹಾಲಿಂಗಕ್ಕೆ ಮನವೆ ಪೀಠವಾಗಿ, ತನುವೆ ಶಿವಾಲಯವಾಗಿ, ನೆನವೆ ಪೂಜೆಯಾಗಿ, ಧ್ಯಾನವೆ ತೃಪ್ತಿಯಾಗಿ, ಅಂಬುಧಿಯೊಳಗೆ ಮುಳುಗಿದ ಪೂರ್ಣಕುಂಭದಂತೆ, ನಿಮ್ಮ ಅವಿರಳ ದಿವ್ಯ ಮಹಾಬೆಳಗಿನೊಳಗೆ ಮುಳುಗಿ, ನಾನು ನೀನೆಂಬುಭಯದ ಕುರುಹ ಮರೆದು ಏನೇನೂ ಅರಿಯದಿರ್ದೆನಯ್ಯಾ ಅಖಂಡೇಶ್ವರಾ.