Index   ವಚನ - 661    Search  
 
ಗರ್ವಾಹಂಕಾರವಳಿದು ಸರ್ವಕರಣಂಗಳು ತರಹರವಾಗಿ ಸರ್ವಾಂಗದಲ್ಲಿ ಸರ್ವಾಚಾರ ನೆಲೆಗೊಂಡ ಲಿಂಗೈಕ್ಯಂಗೆ ಅಖಂಡಪರಿಪೂರ್ಣ ಮಹಾಲಿಂಗವೆ ಭಾಜನವಾಗಿ, ಆ ಘನಮಹಾಲಿಂಗಕ್ಕೆ ಆ ನಿಜಲಿಂಗೈಕ್ಯನೆ ಭಾಜನವಾಗಿ, ಅಂಗಲಿಂಗವೆಂಬ ಉಭಯಭಾವವಳಿದು ಕ್ಷೀರ ಕ್ಷೀರವ ಬೆರೆದಂತೆ ಅವಿರಳ ಸಮರಸವಾಗಿರ್ಪ ಲಿಂಗೈಕ್ಯಂಗೆ ಏಕಭಾಜನವಲ್ಲದೆ ಉಳಿದವರಿಗೆಲ್ಲಿಯದಯ್ಯಾ ಅಖಂಡೇಶ್ವರಾ?