Index   ವಚನ - 669    Search  
 
ಭಾಷೆಗಳ್ಳಗೇಕೊ ಸಹಭೋಜನ? ದ್ವೇಷಗುಣಿಗೇಕೊ ಸಹಭೋಜನ? ವೇಷಧಾರಿಗೇಕೊ ಸಹಭೋಜನ? ಹುಸಿಹುಂಡಗೇಕೊ ಸಹಭೋಜನ? ಮೋಸ ಮರವೆಯಿಂದೆ ಈಶನೊಡನೆ ಸಹಭೋಜನ ಮಾಡಿದಡೆ ಭವದಲ್ಲಿ ಘಾಸಿಯಾಗುತಿರ್ಪರು ನೋಡಾ ಅಖಂಡೇಶ್ವರಾ.