Index   ವಚನ - 670    Search  
 
ಪ್ರಾಣನ ಹಸಿವೆದ್ದು ದೇಹವನಂಡಲೆವಾಗ ಬಾಯ ಸವಿಯನುಂಬರಲ್ಲದೆ ಲಿಂಗದೇವನ ನೆನಹು ಎಲ್ಲಿಯದೊ? ಆ ಲಿಂಗದ ನೆನಹ ಮರೆದು ಅಂಗಕ್ಕೆ ಕೊಂಡರೆ ಅದೇ ಎಂಜಲು ನೋಡಾ. ಅಂತಹ ಎಂಜಲೋಗರವ ಮರಳಿ ಲಿಂಗಕ್ಕೆ ಕೊಡಲಾಗದು ನೋಡಾ. ಅದೇನು ಕಾರಣವೆಂದೊಡೆ: ಕಂಡವರ ಕಂಡು ತಾನುಂಡು ಎಂಜಲವ ಮರಳಿ ಮರಳಿ ಭೋಜಿಯ ಕಟ್ಟಿ ಲಿಂಗಕ್ಕೆ ತೋರಿದಡೆ ಹುಳುಗೊಂಡದಲ್ಲಿಕ್ಕುವನು ನೋಡಾ ನಮ್ಮ ಅಖಂಡೇಶ್ವರನು.