ಎನಗೆ ನೀನೇ ಚಿದ್ಭಾಂಡವಯ್ಯಾ;
ನಿನಗೆ ನಾನೇ ಚಿದ್ಭಾಂಡವಯ್ಯಾ.
ಎನಗೆ ನೀನೇ ಚಿದ್ಭಾಜನವಯ್ಯಾ;
ನಿನಗೆ ನಾನೇ ಚಿದ್ಭಾಜನವಯ್ಯಾ.
ಎನಗೆ ನೀನೇ ಸಕಲ ದ್ರವ್ಯ ಪದಾರ್ಥವಯ್ಯಾ;
ನಿನಗೆ ನಾನೇ ಸಕಲದ್ರವ್ಯ ಪದಾರ್ಥವಯ್ಯ.
ನಾನು ನೀನು ಒಂದೇ ಹರಿವಾಣದಲ್ಲಿ
ಸಹಭೋಜನ ಮಾಡುತಿರ್ದೆವಾಗಿ,
ಅಖಂಡೇಶ್ವರಾ, ನಾನು ನೀನೆಂಬುಭಯದ
ಕೀಲು ಕಳಚಿತ್ತು ನೋಡಾ.
Art
Manuscript
Music
Courtesy:
Transliteration
Enage nīnē cidbhāṇḍavayyā;
ninage nānē cidbhāṇḍavayyā.
Enage nīnē cidbhājanavayyā;
ninage nānē cidbhājanavayyā.
Enage nīnē sakala dravya padārthavayyā;
ninage nānē sakaladravya padārthavayya.
Nānu nīnu ondē harivāṇadalli
sahabhōjana māḍutirdevāgi,
akhaṇḍēśvarā, nānu nīnembubhayada
kīlu kaḷacittu nōḍā.