Index   ವಚನ - 683    Search  
 
ಏನೆಂಬೆನೇನೆಂಬೆನಯ್ಯ ಒಂದು ಎರಡಾದುದ. ಏನೆಂಬೆನೇನೆಂಬೆನಯ್ಯ ಎರಡು ಒಂದಾದುದ. ಏನೆಂಬೆನೇನೆಂಬೆನಯ್ಯಾ ಸರ್ವತೋರಿಕೆ ನಿರವಯಲಾದುದ. ಏನೆಂಬೆನೇನೆಂಬೆನಯ್ಯಾ ಅಖಂಡೇಶ್ವರಾ ನಿಮ್ಮೊಳಗೆನಗೆ ಸಮರಸೈಕ್ಯಸಂಬಂಧವಾದುದ.