Index   ವಚನ - 685    Search  
 
ನಾನಿಹ ಪರಿಯಂತರ ನೀನುಂಟು; ನೀನಿಹ ಪರಿಯಂತರ ನಾನುಂಟು. ನಾನು ನೀನೆಂಬುಭಯದ ಸಂದು ಹೂಳಿದ ಬಳಿಕ, ಇನ್ನೇನುಂಟು ಹೇಳಾ ಅಖಂಡೇಶ್ವರಾ?