Index   ವಚನ - 686    Search  
 
ತನುವಿಹ ಪರಿಯಂತರ ನಿಮ್ಮ ಪೂಜಿಸಿದೆನಯ್ಯಾ. ಮನವಿಹ ಪರಿಯಂತರ ನಿಮ್ಮ ನೆನೆದೆನಯ್ಯಾ. ಭಾವವಿಹ ಪರಿಯಂತರ ನಿಮ್ಮ ಬಯಸಿದೆನಯ್ಯಾ. ಇಂತಿವೆಲ್ಲವು ನಿಮ್ಮಲ್ಲಿ ಸಯವಾದ ಬಳಿಕ ಗಜಭುಕ್ತ ಕಪಿತ್ಥದಂತಿರ್ದೆನಯ್ಯಾ ಅಖಂಡೇಶ್ವರಾ.