ಕಾಲಿಲ್ಲದ ನಡೆ, ಒಡಲಿಲ್ಲದ ರೂಪು,
ಕಂಗಳಿಲ್ಲದ ನೋಟ,
ಮನವಿಲ್ಲದ ಬೇಟ;
ಭಾವವಿಲ್ಲದ ತೃಪ್ತಿ, ಜೀವವಿಲ್ಲದ ಶರಣನ
ಸುಳುಹ ಕಂಡು
ಬೆರಗಾದೆನಯ್ಯಾ ಅಖಂಡೇಶ್ವರಾ.
Art
Manuscript
Music
Courtesy:
Transliteration
Kālillada naḍe, oḍalillada rūpu,
kaṅgaḷillada nōṭa,
manavillada bēṭa;
bhāvavillada tr̥pti, jīvavillada śaraṇana
suḷuha kaṇḍu
beragādenayyā akhaṇḍēśvarā.