Index   ವಚನ - 693    Search  
 
ನಾದ ನಿಜವೆಂಬೆನೆ? ನಾದ ನಿಜವಲ್ಲ. ಬಿಂದು ನಿಜವೆಂಬೆನೆ? ಬಿಂದು ನಿಜವಲ್ಲ. ಕಳೆ ನಿಜವೆಂಬೆನೆ? ಕಳೆ ನಿಜವಲ್ಲ. ಆ ನಾದ ಬಿಂದು ಕಳೆಗಳಿಂದೊಗೆದ ಜಗವು ನಿಜವೆಂಬೆನೆ? ಜಗವು ನಿಜವಲ್ಲ. ಆ ಜಗದ ಮಧ್ಯದಿ ತೋರುವ ಲೀಲೆ ನಿಜವೆಂಬೆನೆ? ಲೀಲೆ ನಿಜವಲ್ಲ. ಇನ್ನಾವುದು ನಿಜವೆಂದೊಡೆ: ಅಲ್ಲ-ಅಹುದು, ಇಲ್ಲ-ಉಂಟು, ಬೇಕು-ಬೇಡ ಎಂಬ ಭಾವಕ್ಕೆ ಇಂಬಿಲ್ಲದೆ ತಾನಿದಿರೆಂಬ ಶಂಕೆದೋರದೆ, ಅಖಂಡ ಪರಿಪೂರ್ಣವಾದ ಮಹಾಘನವೆ ನಿಮ್ಮ ನಿಜದ ನಿಲವಯ್ಯಾ ಅಖಂಡೇಶ್ವರಾ.