Index   ವಚನ - 705    Search  
 
ಅಖಂಡಜ್ಞಾನಭರಿತ ಶರಣಂಗೆ ಪೃಥ್ವಿಯೆ ಖಟ್ವಾಂಗ, ಆಕಾಶವೇ ಕಿರೀಟ, ಮೇಘಾದಿಗಳೆ ಮಜ್ಜನ, ನಕ್ಷತ್ರಂಗಳೆ ಪುಷ್ಪಮಾಲೆಗಳು, ವೇದಂಗಳೆ ಮುಖಂಗಳು, ಶಾಸ್ತ್ರಂಗಳೆ ಅವಯವಂಗಳು, ಸೋಮಸೂರ್ಯಾಗ್ನಿಗಳೆ ನಯನಂಗಳು, ದಶದಿಕ್ಕುಗಳೆ ಹೊದಿಕೆಗಳು, ಬ್ರಹ್ಮಾಂಡವೆ ಒಡಲಾದ ಮಹಾಮಹಿಮನ ಏನೆಂದು ಉಪಮಿಸಬಹುದಯ್ಯಾ ಅಖಂಡೇಶ್ವರಾ?