•  
  •  
  •  
  •  
Index   ವಚನ - 1186    Search  
 
ಜಗತ್ತಿನ ಹೊಲೆಯನೆಲ್ಲವನು ಉದಕ ಕೊಳುವುದು, ಆ ಉದಕದ ಹೊಲೆಯ ಕಳೆದಲ್ಲದೆ ಲಿಂಗಕ್ಕೆ ಮಜ್ಜನಕ್ಕೆರೆವ ಲಿಂಗದ್ರೋಹಿಗಳ ಮಾತಕೇಳಲಾಗದು. ಮೇಘಬಿಂದುವಿನಿಂದಾದ ಉದಕ, ಸೂರ್ಯನ ಮುಖದಿಂದಾಗಿ ದ್ರವ್ಯ, ಅಗ್ನಿಯ ಮುಖದಿಂದಾದ ಪಾಕ- ಇಂತಿವರ ಪೂರ್ವಾಶ್ರಯವ ಕಳೆದಲ್ಲದೆ ಭಕ್ತ ಮಾಹೇಶ್ವರರೂ ಶೀಲಪರರೂ ಮೊದಲಾದ ನಾನಾ ವ್ರತಿಗಳು ಲಿಂಗಕ್ಕೆ ಮಜ್ಜನವ ಮಾಡಲಾಗದು, ಅರ್ಪಿಸಲಾಗದು, ಅದೆಂತೆಂದಡೆ: ಉದಕದ ಪೂರ್ವಾಶ್ರಯವನು, ದ್ರವ್ಯದ ಪೂರ್ವಾಶ್ರಯವನು, ಕಳೆದಲ್ಲದೆ ಲಿಂಗಕ್ಕೆ ಅರ್ಪಿಸಬಾರದು. ಇಂತೀ ತ್ರಿವಿಧದ ಪೂರ್ವಾಶ್ರಯವ ಕಳೆವ ಪರಿಯೆಂತೆಂದಡೆ: ಉದಕದ ಪೂರ್ವಾಶ್ರಯವ ಮಂತ್ರಯುಕ್ತವಾಗಿ ಜಂಗಮದ ಪಾದೋದಕದಿಂದ ಕಳೆದು ಪಾಕಪ್ರಯತ್ನವ ಮಾಡುವುದು. ದ್ರವ್ಯದ ಪೂರ್ವಾಶ್ರಯ ಜಂಗಮದ ಹಸ್ತ ಪರುಷದಿಂದ ಹೋದುದಾಗಿ ಅಗ್ನಿಯಲಾದ ಪಾಕದ ಪೂರ್ವಾಶ್ರಯವು ಜಂಗಮದ ಪ್ರಸಾದದಿಂದ ಹೋಯಿತ್ತು. ಈ ಶಿವನ ವಾಕ್ಯಗಳನರಿದು, ಮತ್ತೆ ಜಂಗಮದ ಪಾದೋದಕದಿಂದ ಪಾಕಪ್ರಯತ್ನವ ಮಾಡಲಾಗದು, ಲಿಂಗಕ್ಕೆ ಮಜ್ಜನಕ್ಕೆರೆಯಲಾಗದೆಂಬ ಶೈವ ಬೌದ್ಧ ಚಾರ್ವಾಕ ಚಾಂಡಾಲ ಶಿವದ್ರೋಹಿಯ ಮಾತಕೇಳಿ, ಬಿಟ್ಟನಾರೆ, ಅವ ವ್ರತಭ್ರಷ್ಟ ಅವನ ಮುಖವ ನೋಡಲಾಗದು. ಸಾಕ್ಷಿ:``ಸರ್ವಾಚಾರಪರಿಭ್ರಷ್ಟಃ ಶಿವಾಚಾರೇನ ಶುಧ್ಯತಿ ಶಿವಾಚಾರ ಪರಿಭ್ರಷ್ಟಃ ರೌರವಂ ನರಕಂ ವ್ರಜೇತ್'' ಇಂತೆಂದುದಾಗಿ, ಸಮಸ್ತವಾದ ವ್ರತಂಗಳಲ್ಲಿ ಭ್ರಷ್ಟರಾದವರ ಶಿವಾಚಾರದಲ್ಲಿ ಶುದ್ಧನ ಮಾಡಬಹುದು, ಶಿವಾಚಾರದಲ್ಲಿ ಭ್ರಷ್ಟರಾದವರಿಗೆ ರೌರವ ನರಕ ತಪ್ಪದು. ಅವಗೆ ಪ್ರಾಯಶ್ಚಿತ್ತವಿಲ್ಲಾಗಿ ಅವನ ಮುಖವ ನೋಡಲಾಗದು, ಮತ್ತಂ ``ವ್ರತಭ್ರಷ್ಟಮುಖಂ ದೃಷ್ಟ್ವಾಶ್ವಾನಸೂಕರವಾಯಸಂ| ಅಶುದ್ಧಸ್ಯ ತಥಾದೃಷ್ಟಂ ದೂರತಃ ಪರಿವರ್ಜಯೇತ್''- ಇಂತೆಂದುದಾಗಿ, ವ್ರತಶೀಲಗಳಲ್ಲಿ ನಿರತನಾದ ಶಿವಶರಣನು ಪಥದಲ್ಲಿ ಆಚಾರಭ್ರಷ್ಟನ ಕಂಡಡೆ, ಮುಖವ ನೋಡಿದಡೆ, ನಾಯ ಕಂಡಂತೆ ಸೂ[ಕರ]ನ ಕಂಡಂತೆ ಕಾಗೆಯ ಕಂಡಂತೆ ಹೇಸಿಗೆಯ ಕಂಡಂತೆ ತೊಲಗುವುದು. ಆ ವ್ರತವ ಬಿಡಿಸಿದವನು, ಅವನ ಮಾತ ಕೇಳಿ ಬಿಟ್ಟವನು, ಇಬ್ಬರೂ ಗುರುಲಿಂಗಜಂಗಮ ಪಾದೋದಕ ಪ್ರಸಾದಕ್ಕೆ ಹೊರಗಾಗಿ ಅನಂತಕಾಲ ನರಕವನೈದುವರು. ಆ ಪಾಪಿಗಳ ಮುಖವ ನೋಡಲಾಗದು, ನುಡಿಸಲಾಗದು ವ್ರತನಿಷ್ಠೆಯುಳ್ಳವರು ಕಾಣಾ ಗುಹೇಶ್ವರಾ.
Transliteration Jagattina holeyanellavanu udaka koḷuvudu, ā udakada holeya kaḷedallade liṅgakke majjanakkereva liṅgadrōhigaḷa mātakēḷalāgadu. Mēghabinduvinindāda udaka, sūryana mukhadindāgi dravya, agniya mukhadindāda pāka- intivara pūrvāśrayava kaḷedallade bhakta māhēśvararū śīlapararū modalāda nānā vratigaḷu liṅgakke majjanava māḍalāgadu, arpisalāgadu, adentendaḍe: Udakada pūrvāśrayavanu, Jagattina holeyanellavanu udaka koḷuvudu, ā udakada holeya kaḷedallade liṅgakke majjanakkereva liṅgadrōhigaḷa mātakēḷalāgadu. Mēghabinduvinindāda udaka, sūryana mukhadindāgi dravya, agniya mukhadindāda pāka- intivara pūrvāśrayava kaḷedallade bhakta māhēśvararū śīlapararū modalāda nānā vratigaḷu liṅgakke majjanava māḍalāgadu, arpisalāgadu, adentendaḍe: Udakada pūrvāśrayavanu, Jaṅgamada pādōdakadinda pākaprayatnava māḍalāgadu, liṅgakke majjanakkereyalāgademba śaiva baud'dha cārvāka cāṇḍāla śivadrōhiya mātakēḷi, biṭṭanāre, ava vratabhraṣṭa avana mukhava nōḍalāgadu. Sākṣi:``Sarvācāraparibhraṣṭaḥ śivācārēna śudhyati śivācāra paribhraṣṭaḥ rauravaṁ narakaṁ vrajēt'' intendudāgi, samastavāda vrataṅgaḷalli bhraṣṭarādavara śivācāradalli śud'dhana māḍabahudu, śivācāradalli bhraṣṭarādavarige raurava naraka tappadu. Avage prāyaścittavillāgi Avana mukhava nōḍalāgadu, mattaṁ ``vratabhraṣṭamukhaṁ dr̥ṣṭvāśvānasūkaravāyasaṁ| aśud'dhasya tathādr̥ṣṭaṁ dūrataḥ parivarjayēt''- intendudāgi, vrataśīlagaḷalli niratanāda śivaśaraṇanu pathadalli ācārabhraṣṭana kaṇḍaḍe, mukhava nōḍidaḍe, nāya kaṇḍante sū[kara]na kaṇḍante kāgeya kaṇḍante hēsigeya kaṇḍante tolaguvudu. Ā vratava biḍisidavanu, avana māta kēḷi biṭṭavanu, ibbarū guruliṅgajaṅgama pādōdaka prasādakke horagāgi anantakāla narakavanaiduvaru. Ā pāpigaḷa mukhava nōḍalāgadu, nuḍisalāgadu vrataniṣṭheyuḷḷavaru kāṇā guhēśvarā.
Hindi Translation संसार के सारे मैल को उदक अपनायेगा, उस उदक का मैला बिना धोये लिंग को मज्जन करने लिंगद्रोहियों की बात न सुनना। मेघबिंदु से हुआ उदक, सूर्य के मुख से द्रव्य बने, अग्नि मुख से हुआ पाक-ऐसे इनके पूर्वाश्रय बिना खोये, भक्त, माहेश्वर, शीलवान आदि नाना व्रति लिंग को मज्जन नहीं करना है। अर्पित मत करना, वह कैसे कहें तो - उदक के पूर्वाश्रय को, द्रव्य के पूर्वाश्रय को बिना धोये लिंगार्पित मत करना। ऐसे त्रिविध पूर्वाश्रय धोने की रीति कैसे कहे तो- उदक पूर्वाश्रय मंत्रयुक्त से जंगम पादोदक से धोकर पाक प्रयत्न करना । द्रव्यका पूर्वाश्रय जंगम के हस्त परुष से जाने से अग्नि से हुआ पाक का पूर्वाश्रय जंगम के प्रसाद से गया था। शिव के इन वाक्यों को जाने, फिर जंगम के पादोदक से पाक प्रयत्न न करना, लिंग को मज्जन नहीं करना कहे ऐसे शैव, बौद्ध चार्वाक, चांडाल, शिव द्रोहियों की बातें सुनकर, छोडे तो-वह व्रतभ्रष्ट, उसका मुख न देखना। साक्षि –“सर्वाचार परिभ्रष्टः शिवाचारेन शुध्यति । शिवाचार परिभ्रष्टः रैवनरकं व्रजेत्”॥ ऐसे कहने से समस्त हुए व्रतों में भ्रष्टहुओं को शिवाचार में शुद्ध कर सकते। शिवाचार में भ्रष्ट हुओं को रौरव नरक न चूकता । उसका प्रायश्चित्त न होने से उसका मुख मत देखना, फिर- "व्रतभ्रष्टमुखं दृष्टवा श्वान सूकरवायसं। अशुद्धस्य तथादृष्टं दूरत: परिवर्जयेत्” ॥ ऐसे कहें तो- व्रतशील में निरत हुआ शिवशरण के पथ में आचार भ्रष्ट कोदेखेतो, मुख देखे तो कुत्ता देखे जैसे, सूतकी देखे जैसे, कौआ देखे जैसे, मल देखे जैसे दूर हो जाता है। उस व्रत को छुड़ाया, उसकी बात सुनकर छोडे दोनों को गुरुलिंग जंगम पादोदक प्रसाद के बाहर होकर अनंतकाल नरक में जायेंगे।उन पापियों का मुख मत देखना।। मत बोलना व्रतनिष्टा में रहे देखा गुहेश्वरा। Translated by: Eswara Sharma M and Govindarao B N