Index   ವಚನ - 709    Search  
 
ಬಯಲು ಬಯಲು ಬೆರೆದಲ್ಲಿ ಮೇರೆಯುಂಟೆ ಅಯ್ಯಾ? ಕ್ಷೀರ ಕ್ಷೀರವ ಕೂಡಿದಲ್ಲಿ ಪದರುಂಟೆ ಅಯ್ಯಾ? ಉರಿಕರ್ಪುರಸಂಯೋಗ ನಿಷ್ಪತ್ತಿಯಾದಲ್ಲಿ ಮರಳಿ ರೂಪಿಸಿ ಹಿಡಿಯಲುಂಟೆ ಅಯ್ಯಾ? ನಿಮ್ಮೊಳೊಡವೆರೆದ ನಿಜೈಕ್ಯನ ಕುರುಹ ಮರಳಿ ತೋರಲುಂಟೆ ಅಯ್ಯಾ ಅಖಂಡೇಶ್ವರಾ?